ಭಾರತದ ದೊಡ್ಡ ಪಕ್ಷಗಳಲ್ಲಿ ಬಿಜೆಪಿ ಮೊದಲು ನಿಲ್ಲುತ್ತದೆ. ಬಲಪಂಥೀಯ ವಿಚಾರಧಾರೆಯ ಅತಿದೊಡ್ಡ ಪಕ್ಷ ಇದು. ಎಲ್ಲಾ ರಾಜಕಾರಣಿಗಳೂ ಸೆಕ್ಯುಲಾರಿಸಂ ಎಂಬ ಸುಳ್ಳು ನಷೆಯಲ್ಲಿದ್ದಾಗ ರಾಮಮಂದಿರದ ಪರವಾಗಿ ಧ್ವನಿಯೇರಿಸಿ ಪಕ್ಷದ ಬಾವುಟ ನೆಟ್ಟವರು ಅಂದಿನ ಮುರುಳಿ ಮನೋಹರ್ ಜೋಷಿ ಲಾಲ್ ಕೃಷ್ಣ ಆಡ್ವಾಣಿ, ವಾಜಪೇಯವರಂತಹ ನಾಯಕರು. ಅಂದಿನಿಂದ ಇಲ್ಲಿಯವರೆಗೂ ಹಿಂದುತ್ವದ ದೊಡ್ಡ ಪ್ರತಿಪಾದಕನಾಗಿ ಬಿಜೆಪಿ ಗುರುತಿಸಿಕೊಂಡಿದೆಯಾದರೂ ಅಧಿಕಾರ ವಹಿಸಿಕೊಂಡಿದ್ದು ಬಹಳ ಕಡಿಮೆ.
ಒಂದು ಹಂತದಲ್ಲಿ ತಮ್ಮ ಅತಿಯಾದ ಹಿಂದುತ್ವದಿಂದ ಅಡ್ವಾಣಿ ಪ್ರಧಾನಿಯಾಗುವ ಅವಕಾಶವನ್ನು ಕಳೆದುಕೊಂಡರು.
ಆದರೆ ಇದೇ ಬಿಜೆಪಿಗೆ ಅದೇ ಮೂಲ ಸಿದ್ಧಾಂತದಲ್ಲೇ ಹೊಸ ಬಲ ಕೊಟ್ಟವರು ನರೇಂದ್ರ ಮೋದಿ. 2014 ರಲ್ಲಿ ಮೊದಲ ಬಾರಿ,2019 ರಲ್ಲಿ ಎರಡನೇ ಬಾರಿ ಮೋದಿ ಪೂರ್ಣ ಬಹುಮತದೊಂದಿಗೆ ಪ್ರಧಾನಿಯಾಗಿದ್ದಾರೆ.
ಮೋದಿ ಬಂದನಂತರ ಬಿಜೆಪಿ ಬದಲಾಗಿದೆ. ಭ್ರಷ್ಟಾಚಾರ ಮುಕ್ತ ಆಡಳಿತ ಎಂಬ ಸಿದ್ಧಾಂತ ಮೋದಿಯವರದ್ದು,ಅದನ್ನವರು ಪಾಲಿಸಿದ್ದಾರೆ ಕೂಡಾ.
ಭ್ರಷ್ಟಾಚಾರ ನಿರ್ಮೂಲನೆಯ ಹೆಸರಿನಲ್ಲೇ ಬಂದ ಕೇಜ್ರಿವಾಲ್ ಇಂದು ಏನಾಗಿದ್ದಾರೆ ಎನ್ನುವುದು ನಮ್ಮ ಕಣ್ಣುಮುಂದಿದೆ.
ಆದರೆ ಮೋದಿ ಹಾಗಾಗಲಿಲ್ಲ. ಅವರ ಆಡಳಿತದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ರಾಫೇಲ್ ಹೆಸರಿನಲ್ಲಿ ಅವರನ್ನು ಬಗ್ಗಿಸಲು ರಾಹುಲ್ ಗಾಂಧಿ ಪ್ರಯತ್ನಿಸಿದನಾದರೂ ಸುಪ್ರೀಂ ಕೈಯಲ್ಲಿ ಛೀಮಾರಿ ಹಾಕಿಸಿಕೊಂಡ.
ಎತ್ತರದಲ್ಲಿ ಅಷ್ಟು ಶುದ್ಧಹಸ್ತರಾಗಿರುವ ಮೋದಿ ತಳ ಮಟ್ಟದಲ್ಲಿ ಸಂಪೂರ್ಣ ಭ್ರಷ್ಟಾಚಾರ ವಿರೋಧಿಯಾಗಿದ್ದಾರಾ?
ಮಹಾರಾಷ್ಟ್ರದ ಪರಿಸ್ಥಿತಿ ಗೊತ್ತಿದ್ದದ್ದೇ. ಚುಣಾವಣಾ ಪೂರ್ವ ಮೈತ್ರಿಯಿಂದ ಅಧಿಕಾರದಾಸೆಗೆ ತನ್ನ ಸಿದ್ಧಾಂತವನ್ನು ಗಾಳಿಗೆ ತೂರಿದ ಶಿವಸೇನೆ ಕಾಂಗ್ರೆಸ್ ಹಾಗೂ ಎನ್ ಸಿಪಿ ಜೊತೆ ಸೇರಿ ಸರ್ಕಾರ ರಚಿಸಲು ಮುಂದಾಯಿತು. ಆದರೆ ಏತನ್ಮಧ್ಯೆ ರಾಜ್ಯಪಾಲರು ರಾಷ್ಟ್ರಪತಿ ಆಡಳಿತ ಘೋಷಿಸಿದರು!
ಹೀಗೆ ಬೆಳೆದು ಇನ್ನೇನು ಶಿವಸೇನೆ, ಕಾಂಗ್ರೆಸ್ ಹಾಗೂ ಎನ್ ಸಿಪಿ ಬಹುಮತ ಸಾಬೀತುಪಡಿಸಬೇಕು ಎಂಬಷ್ಟರಲ್ಲಿ ಎನ್ ಸಿಪಿ ಶಾಸಕ ಅಜಿತ್ ಪವಾರ್ ಬಿಜೇಪಿಗೆ ಬೆಂಬಲ ಕೊಟ್ಟು ಹಠಾತ್ತನೆ ಫಡ್ನಿವೀಸ್ ಮುಖ್ಯಮಂತ್ರಿ ಆಗಿಬಿಟ್ಟರು.
ಶಿವಸೇನೆಗೆ ಪಾಠ ಕಲಿಸಲು ಬಿಜೆಪಿ ಇಟ್ಟ ಈ ಹೆಜ್ಜೆಯನ್ನು ಟೀಕಿಸುವ ನೈತಿಕತೆ ಬೇರೆ ಯಾವ ಪಕ್ಷಕ್ಕೂ ಖಂಡಿತವಾಗಿ ಇಲ್ಲ.
ಕರ್ನಾಟಕದಲ್ಲಿ ಚುಣಾವಣೆಯಲ್ಲಿ ಬಹಳ ಮುಖ್ತ ಪಾತ್ರ ವಹಿಸಬಲ್ಲವರಾಗಿದ್ದ ಜನಾರ್ಧನ ರೆಡ್ಡಿಯನ್ನು ಬ್ರಷ್ಟ ಎಂಬ ಕಾರಣಕ್ಕೆ ಬಿಜೆಪಿ ಹೊರಗಿಟ್ಟಿತು ಆದರೆ ಕಾಂಗ್ರೆಸ್ ಜೈಲಿನಿಂದ ಬಂದ ಡಿ.ಕೆ ಯನ್ನು ಅಪ್ಪಿಕೊಂಡಿತು ಎಂಬಲ್ಲಿಗೆ ಬಿಜೆಪಿಯನ್ನು ನೈತಿಕವಾಗಿ ಎದುರಿಸುವ ಶಕ್ತಿ ಬೇರೆ ಪಕ್ಷಗಳಿಗಿಲ್ಲ.
ಆಪರೇಶನ್ ಗಳು ಸರ್ವೇ ಸಾಮಾನ್ಯವಾಗಿರುವ ರಾಜಕೀಯ ಯುಗದಲ್ಲಿ ಆಪರೇಷನ್ ಕಮಲ ರಾಜಕೀಯ ನಡೆಯಾಗಿ ಕಾಣುತ್ತದೆಯೇ ಹೊರತು ಬ್ರಷ್ಟತೆ ಎನಿಸುವುದಿಲ್ಲ ಆದರೆ ನಿಜವಾಗಿ ನಮ್ಮಂತಹ ಮೋದಿ ಭಕ್ತರಿಗೆ ಷಾಕ್ ಕೊಟ್ಟ ವಿಚಾರ ಬೇರೆ ಇದೆ.
ಅಜಿತ್ ಪವಾರ್ ಮೇಲೆ ಇದದ 70000 ಕೋಟಿಯ ಹಗರಣದ ವಿಚಾರಣೆಯನ್ನು ಕೈಬಿಡಲಾಗಿದೆ. ಇದು ಖಂಡಿತವಾಗಿ ಬೃಷ್ಟಾಚಾರಕ್ಕೆ ಕೊಡುವ ಬೆಂಬಲವಲ್ಲವೇ? ಅಂದರೆ ಸ್ವಂತ ಲಾಭಕ್ಕೆ ಸಿದ್ಧಾಂತವನ್ನು ಬಿಡಲು ಬಿಜೆಪಿ ಸಿದ್ಧವಾದಂತಲ್ಲವೆ?
ಇಂತಹ ಕೆಳಮಟ್ಟದ ಕೆಲಸಕ್ಕೆ ಕೈ ಹಾಕುವುದಕ್ಕಿಂತ ವಿರೋಧ ಪಕ್ಷದಲ್ಲೇ ಗೌರವವಾಗಿ ಕೂರಬಹುದು ಎನಿಸುತ್ತದೆ.
ಅಷ್ಟಕ್ಕೂ ಬಿಜೆಪಿ ಸರ್ಕಾರ ಬಿದ್ದಂತೇ. ಉಪಮುಖ್ಯಮಂತ್ರಿ ಅಜಿತ್ ಪವಾರ್ ಬಹುಮತ ಸಾಬೀತಿಗು ಮೊದಲೆ ರಾಜಿನಾಮೆ ಕೊಟ್ಟಾಗಿದೆ ಅಂದರೆ ಅವರ ಬೆಂಬಲ ಇನ್ನು ಬಿಜೆಪಿಗೆ ಇಲ್ಲ ಎಂದಾಯಿತು. ಇನ್ನು ನಾಳೆ ಫಡ್ನಿವೀಸ್ ಬಹುಮತ ಸಾಬೀತುಪಡಿಸುವುದು ಕನಸಿನ ಮಾತು.
Sir Big fan 💖
ReplyDeleteTruu saar. 👌
ReplyDelete